ಉದ್ಭವ: 1 ಉದ್ ಮತ್ತು ಭೂ ಇವುಗಳಿಂದ ನಿಷ್ಪನ್ನವಾಗಿದೆ. ಉತ್ಪತ್ತಿ, ಜನ್ಮ, ಮೂಲಸ್ಥಾನ ಎಂಬ ಅರ್ಥದಲ್ಲಿ ಉಪನಿಷತ್ತು ಮುಂತಾದ ಗ್ರಂಥಗಳಲ್ಲಿ ಇದರ ಪ್ರಯೋಗವನ್ನು ಕಾಣಬಹುದು. 2 ನಹುಷನ ಮಗನ ಹೆಸರು. 3 ವಿಷ್ಣು ಸಹಸ್ರನಾಮದಲ್ಲಿರುವಂತೆ ವಿಷ್ಣುವಿನ ಒಂದು ಹೆಸರು: ಸಮುದ್ಗತೋ ಭವೋಯಸ್ಮಾದುದ್ಭವಃ ಪರಿಕೀರ್ತಿತಃ. ಯಾರಿಂದ ಈ ಲೋಕ ಹೊರಹೊಮ್ಮಿತೋ ಅವನು ಉದ್ಭವ.	(ಬಿ.ಕೆ.ಎಸ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ